ಅಬ್ಭಾ ಕ್ಯಾನ್ಸರ್!-Geetha HG

ಅಬ್ಭಾ ಕ್ಯಾನ್ಸರ್!

ಒಬ್ಬ ವ್ಯಕ್ತಿಗೆ ತನಗೆ ಕ್ಯಾನ್ಸರ್ ಇದೆ ಎಂದು ತಿಳಿದುಬಂದರೆ ಅದೊಂದು ಜೀರ್ಣಿಸಕೊಳ್ಳಲು ಆಗದಂತಹ ಆಘಾತಕರ ವಿಷಯ. ತದನಂತರ ಜೀವನದ ಪ್ರತಿಯೊಂದು ಆಯಾಮವೂ ಮೊದಲಿನಂತಿರುವುದಿಲ್ಲ. ಮಹತ್ತರ ಬದಲಾವಣೆಗಳು ಪ್ರಾರಂಭವಾಗುವದರಿಂದ ಕ್ಯಾನ್ಸರ್ನಿಂದ ಗುಣಮುಖವಾದವರು ಈ ವ್ಯಾಧಿಯಿಂದ ಚೇತರಿಸಿಲೊಳ್ಳುವದನ್ನು “ಪುನರ್ಜನ್ಮ” ಎನ್ನುವರು.

ಫೆಬ್ರವರಿ ೪ ಪ್ರಪಂಚ ಕ್ಯಾನ್ಸರ್ ದಿನವೆಂದು ದಿನಪತ್ರಿಕೆಗಳಲ್ಲಿ ಬಂದ ಬರಹಗಳನ್ನ ಓದುತ್ತಿರುವಾಗ ನನ್ನ ನೆರೆಮನೆಯ ಗೆಳತಿ ಜಾನಕಿ “ಅಯ್ಯೋ ಅದನ್ನ ಓದೋದು ಬೇಡಪ್ಪ! ಆ ಪದವೇ ತುಂಬ ಭಯಭ್ರಾಂತಿ ಮಾಡುತದೆ ” ಅಂದಾಗ ನನ್ನ ಮನಸ್ಸು ಮೂರು ವರ್ಷಗಳ ಹಿಂದೆ ಓಡಿತು.

ಒಂದು ಮುಂಜಾನೆ ಕೆಮೋ ವಾರ್ಡ್ ನಲ್ಲಿ ನಡೆಗೇ ಸಂಭಾಷಣೆಗಳು ನೆನಪಿಗೆ ಬಂದವು.

ನಾರಾಯಣ, ಮಧ್ಯವಸ್ಕರು ತಮ್ಮ ಮಗಳು ಕ್ಯಾಂಟೀನನ ಕಡೆ ನೋಡುತಾ ನಿಟ್ಟುಸಿರಿನ ಜೊತೆ ಹೀಗೆಂದರು “ನನ್ನ ಮಗಳು ಡಿಗ್ರಿ ಕೊನೆ ವರ್ಷ ಮಾತು ಮಗ ೨ನ್ಡ್ PUC ಓದುತಿದ್ದಾರೆ. ಇದ್ದಬದ್ದ ಹಣ ಎಲ್ಲ ಖರ್ಚ್ ಆಗತಿದೆ, ಅವರ ವಿದ್ಯಾಭಾಸಕ್ಕೆ ಹಣ ಹೇಗೆ ಹೊಂದಿಸುವುದೋಗೊತ್ತಿಲ್ಲ . ಇದನ್ನು ಕೇಳಿದ ಸೀತಾ ದುಃಖಭರಿತ ಧ್ವನಿಯಿಂದ “ಈ ವರ್ಷ ನಮ್ಮ ಮಗಳಿಗೆ ಮಾಡುವೆ ಮಾಡ್ವೇಕು ಅಂದ್ಕೊಂಡಿದ್ದೆವು. ದುಡ್ಡೆಲ್ಲ ಖರ್ಚು ಆಗಿದೆ” ಅಂತ ಹೇಳಿದಳು.

“ಅಮ್ಮ ನಮ್ಮಂಥ ಖಾಯಿಲೆ ಇರುವ ಮಕ್ಕಳನ್ನ ಯಾರು ಮದ್ಕೊಳ್ತಾರೋ ಗೊತ್ತಿಲ್ಲ” ಅಂದಳು ರುಕ್ಮಿಣಿ ಬಾಯಿ ಪಕ್ಕದ ಬೆಡ್ನಿಂದ .

ನಿಟ್ಟುಸಿರು ಕೇಳಿ ಬಂದ ಕಡೆ ತಿರುಗಿ ನೋಡಲು, ಲಕ್ಷ್ಮಣ “ನಾನು ನನ್ನ ಕುಟುಂಬಕ್ಕಾಗಿ ತುಂಬ ಶ್ರಮವಹಿಸಿದೆ. ಈಗ ಈ ಖಾಯಿಲೆ ಬಂದಿದೆ ಅಂದ ತಕ್ಷಣ ನನ್ನವರೆಲ್ಲ ನನ್ನನ್ನು ‘ಪಾಪ ಮಾಡಿದೆವೆನೆಂದು’
‘ಇದು ಪೂರ್ವ ಜನ್ಮದ ಪ್ರಾರಭಖರ್ಮ’ ಎಂದು ಹೇಳಿ ದೂರ ಸರಿದಿದ್ದಾರೆ . ನಾನು ಏನು ಮಾಡಲಿ ಅಂತ ಗೊತ್ತಿಲ್ಲ. ಏಕಾಂಗಿ ಆಗಿ ಬಿಟ್ಟಿದ್ದೀನಿ” ಅಂತ ಹೇಳಿ ಅಳುವುದಕ್ಕೆ ಶುರು ಮಾಡಿದನು.
ಒಬ್ಬೊರದ್ದು ಒಂದೋಒಂದು ಚಿಂತೆ .

ನಾನೇ ನನ್ನ ಪತಿ ಅವರ ಕ್ಯಾನ್ಸರ್ ಚಿಕಿತ್ಸೆಯ ಕುರಿತು ಭಯ ಮತ್ತುಅನಿಶ್ಚಿಥೆಯ ಸಮ್ಮಿಶ್ರಿತ ಸಹಸ್ರ ಭಾವನೆಗೊಡನೆ ಕಂಗಾಲಾಗಿದ್ದೆ.ಇವರೆಲ್ಲರ ಭಯ ಮಿಶ್ರಿತ ಆಂದೋಳನಯುಕ್ತ ಪ್ರಶ್ನೆಗಳಿಗೆ ನನ್ನಲ್ಲಿ ಯಾವ

ನಿಖರವಾದ ಉತ್ತ್ರ್ರಗಳು ಇಲ್ಲದಿದ್ದರಿಂದ ಸುಮ್ಮನೆ ತಲೆಯಾಡಿಸಿ ದುಃಖಭರಿತಳಾಗಿ ಕಿಟಕಿಯ ಹತಿರ ನಿಂತು ನೋಡಲು, ಅಲ್ಲಿ ಅನೇಕ ಜನರು OPD ಅಲ್ಲಿ ತಮ್ಮ ಸರದಿಗಾಗಿ ಕಾಯುತ್ತ ಇರುವುದು ಕಾಣಿಸಿತು.
ಅಲ್ಲಿ ವಿವಿಧ ವಯಸ್ಸು, ಜಾತಿ , ಆರ್ಥಿಕ ಪರಿಸ್ಥಿತಿ ಮತ್ತು ಸಾಕ್ಷರತೆ ಉಳ್ಳವರು ಇದ್ದರು. ಎಲ್ಲರ ಮುಖದಲ್ಲಿ ಒಂದೇ ಭಾವನೆ ಅದೇ ಕ್ಯಾನ್ಸರ್ ಭಯ.ಮುಂದೇನು ಅನ್ನುವ ಚಿಂತೆ.

ಕ್ಯಾನ್ಸರ್ ಅಂದ ಕೂಡಲೇ “ನನಗೆ ಏಕೆ ಬಂತು?’ ಅನ್ನುವ ಪ್ರಶ್ನೆ ನಮ್ಮನ್ನ ಕಾಡತ್ತೆ.
ಎಲ್ಲರು ಅನುಭವಿಸುವ ಭಾವನೆ “ಭಯ” ಎಂಬುವುದು. “ಮೃತ್ಯು ಭಯ” ” ಮತ್ತೆ ಮರುಕಳಿಸಬದೆಂಬ ಭಯ (ಫಿಯರ್ ಓಫ್ ರೇಲಾಪ್ಸ್) “ಕಳಂಕದ ಭಯ” (ಫಿಯರ್ ಓಫ್ ಸ್ಟಿಗ್ಮಾ) , ತಾವೇನೋ ಭಯಂಕರ ತಪ್ಪು ಮತ್ತು ಪಾಪ ಮಾಡಿದ್ದೇವೆಂಬ ಭಾವನೆಗಳು ಮನುಷ್ಯನನ್ನ ಚಿತ್ರಹಿಂಸೆ ಮಾಡತ್ತ್ತೆ .

ಇಂತಹ ಸಮಯದಲ್ಲಿ ರೋಗಿಯ ನಿಕಟವರ್ತಿಗಳ ಸಹಾಯ ಬಹಳಷ್ಟು ಅವಶ್ಯಕತೆ ಇರುತ್ಥದೆ.ಕ್ಯಾನ್ಸರ್ ಭಯ ಹೊರಹೋದರೆ ಕ್ಯಾನ್ಸರ್ ಜೊತೆಗಿನ ಯುದ್ಧದಲ್ಲಿ ಗೆಲುವಿನ ಮೊದಲ ಹೆಜ್ಜೆ ಮುಂದಿಟ್ಟಂತಯೇ ಸರಿ.
ಕ್ಯಾನ್ಸರ್ನ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳು ಹೊರದೊಡಿಸಲು ಸ್ವಲ್ಪ ಕಷ್ಟ ಸಾಧ್ಯ.

ಇದಕ್ಕಿರುವ ಪರಿಹಾರಗಳಲ್ಲಿ ಒಂದು ಮುಖ್ಯವಾದ ಭಾಗ “ಆಪ್ತ ಸಮಾಲೋಚನೆ” (ಎಮೋಷನಲ್ ಕೋನ್ಸೆಲ್ಲಿಂಗ್) ಮತ್ತುಕ್ಯಾನ್ಸರ್ ಸಪೋರ್ಟ್ ಗ್ರೂಪ್ ನಲ್ಲಿ ಭಾಗವಹಿಸುವುದು.

ಸಮಾಲೋಚನೆ ಅಥವಾ ಕೋನ್ಸೆಲ್ಲಿಂಗ್ ಸೆಷನ್ನಲ್ಲಿ ರೋಗಿಗಳು ನಿಸ್ಸಂಕೋಚವಾಗಿ ಮನಸು ಬಿಚ್ಚಿ ತಮಗೆ ಆಗುತಿರುವ ಮಾನಸಿಕ ತುಮುಲಗಳು, ಆವೇದನೆಗಳು, ಕ್ಯಾನ್ಸರ್ ಅಥವಾ ಚಿಕೇತ್ಸೆಯ ಕುರಿತಾದ ಭಯಗಳನ್ನು ತೋಡಿಕೊಳ್ಳಬಹುದು. ಮಾನಸಿಕ ಸಮಾಲೋಚಕರು (ಎಮೋಷನಲ್ ಕೌಂಸೆಲ್ಲೋರ್ಸ್) ವ್ಯಜ್ಞಾನಿಕವಾಗಿ ತರಬೇತಿ ಹೊಂದಿರುವುದರಿಂದ, ವೈದ್ಯ ಚಿಕಿತ್ಸ್ ತಂಡದವರು ಹೇಳುವ ಖಾಯಿಲೆ, ಔಷಧ, ಉಪಚಾರ, ಚಿಕಿತ್ಸೆಯಿಂದ ಆಗಬಹುದಾದ ದೈಹಿಕ ಮಾತು ಮಾನಸಿಕ ದುಷ್ಪರಿಣಾಮಗಳು ಮತ್ತು ಅದನ್ನ ಹೇಗೆ ಎದುರಿಸುವುದು ಅಂತ ವಿಷದಪಡಿಸುತ್ತಾರೆ.

ಕ್ಯಾನ್ಸರ್ ಚಿಕಿತ್ಸೆಯು ವಿಭಿನ್ನಭಾಗಿದ್ದು, ತಿಂಗಳುಗಟ್ಟಲೆ ವೈದ್ಯರು ನಿಗದಿಪಡಿಸುವ ದಿನಾಂಕದಂದು ಸರಿಯಾಗಿ ಆಸ್ಪತ್ರೆಗೆ ಹೋಗಬೇಕಾಗುತದೆ. ಇದನ್ನು ಕಡಗನಿಸಿದಲ್ಲಿ ಚಿಕಿತ್ಸೆ ಪರಿಣಾಮಕಾರಿಯಾಗಿರುವುದಿಲ್ಲ. ಸಾಕಷ್ಟು ರೋಗಿಗಳಲ್ಲಿ ಶಸ್ತ್ರ ಮಾಡಿಸಿಕೊಂಡಮೇಲೆ ಕಿಮೊತೆರಪಿ ಮತ್ತು ರೇಡಿಯೋಥೆರಪಿ ಮಾಡಿಸಿಕೊಳ್ಳಲು ಹಿಂಜರಿಯುತ್ತಾರೆ . ಮಾನಸಿಕ ನಿಪುಣರು ಇದರ ಅವಶ್ಯಕತೆಯನ್ನು ಮನದಟ್ಟು ಮಾಡಿಸಿ ಈ ಹಿಂಜರಿಕೆಯನ್ನು ಹೊರದೊಳಿಸಲು ಸಹಾಯಮಾಡುತಾರೆ.

ನಾನು ಚಿಕಿತ್ಸೆ ಪಡೆಯುತಿದ್ದಾಗ ನನ್ನ ವ್ಯದ್ಯ ತಂಡದವರೊಂದಿಗೆ(ನಾನು ಚಿಕಿತ್ಸೆ ಪಡೆದ ಆಸ್ಪತ್ರೆ “ಶ್ರೀ ಶಂಕರ ಕ್ಯಾನ್ಸರ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್” ) ನನ್ನ ಸಮಸ್ಯೆ ಮತ್ತು ಸಂದೇಹಗಳನ್ನುಚಿಕ್ಕ ವಿಷಯವಿದ್ದರೂ ಕೂಡ ತಪ್ಪದೆ ಹೇಳುತಿದ್ದೆ. ವ್ಯದ್ಯರು ಸಮಾಧಾನ ಹೇಳುತಿದ್ದರು.ಅಲ್ಲಿಯ ನರ್ಸಿಂಗ್ ಸ್ಟಾಫ್ ಬಹಳ ಧೈರ್ಯ ತುಂಬುತಿದ್ದರು.

ಚಿಕಿತ್ಸೆಯ ನಂತರ ದೈನಂದಿನ ಜೀವನಕ್ಕೆ ಹೊಂದುಕೊಳ್ಳುವಾಗ ಸಾಕಷ್ಟು ಅಡಚಣೆಗಳು, ಆತಂಕಗಳು ಮತ್ತು ಕಷ್ಟಗಳು ಎದುರಾಗುತ್ಥವೇ . ಅವುಗಳೆಲ್ಲವನ್ನೂ ಅರ್ಥೈಸಿಕೊಂಡು ಹೊಸ ಜೀವನಕ್ಕೆ ನಮ್ಮನ್ನು ಒಗ್ಗಿಸಿಕೊಳ್ಳುವುದಕ್ಕೆ ಆಪ್ತ ಸಮಾಲೋಚನೆ ಬಹಳ ಸಹಕಾರಿಯಾಗುತ್ತ್ತೆ.
ನನ್ನ ವ್ಯಕ್ತಿಗತ ಅಭಿಪ್ರಾಯವೆಂದರೆ ಚಿಕಿತ್ಸೆಯ ನಂತರ ನಾವು ಬರುವ ಆವರ್ತಿಕಾ ವ್ಯದ್ಯಕೀಯ ತಪಾಸಣೆಯ
(Periodical follow up ) ಜೊತೆ ಆಪ್ತ ಸಮಾಲೋಚನೆ ಕೂಡ ಒಂದು ಭಾಗವಾಗಿದ್ದಾರೆ ಒಳ್ಳೆಯದು ಅಂತ ಅನಿಸುತ್ಥದೇ.

ಕ್ಯಾನ್ಸರ್ ಖಾಯಿಲೆಯಿಂದ ಹೊರಬಂದ ವ್ಯಕ್ತಿಯು ತನ್ನ ಅನುಭವಗಳನ್ನ ಇತರರಲ್ಲಿ ಹಂಚಿಕೊಂಡರೆ “ಕ್ಯಾನ್ಸರ್ ಖಾಯಿಲೆಯು ಒಂದು ಸಾಂಕ್ರಾಮಿಕ ರೋಗ, ಅದೊಂದು ಕಳಂಕ ಮತ್ತು ಕ್ಯಾನ್ಸರ್ ಬಂದರೆ ಮೃತ್ಯುವಿನ ಒಡಲು ಸೇರಿದಂತೆ” ಅನ್ನುವ ಅಂಶಗಳನ್ನು ಸಾಕೆಷ್ಟು ಕಡಿಮೆ ಮಾಡಬಹುದು.

ತಾನು ಚಿಕಿತ್ಸೆಯ ಸಮಯದಲ್ಲಿ ಏನೇನು ಮಾಡಿದನು ಮತ್ತು ಬಂದಂತಹ ಸಮಸ್ಯೆಗಳಿಂದ ಹೇಗೆ ಹೊರಬಂದನು ಮತ್ತು ಯಾವದರಿಂದ ತನಗೆ ಮನೋ ಬಲ ಸಿಕ್ಕಿತ್ತು ಮತ್ತು ನಿಕಟವರ್ತಿಗಳು ಹೇಗೆ ಸಹಾಯ ಮಾಡಿದರು ಎಂಬುದನ್ನು ಸಮಾಜದಲ್ಲಿ ಹಂಚಿಕೊಂಡರೆ ಇದನ್ನು ತಿಳಿದುಕೊಂಡಂಥ ಆಗ ತಾನೇ ಕ್ಯಾನ್ಸರನ್ನು ಎದುರಿಸಿತ್ತಿರುವ ವ್ಯಕ್ತಿಗೆ ಮನೋಬಲ ಸಿಗುತ್ಥದ. ಇದರಿಂದ ಆಗ ತಾನೇ ಕ್ಯಾನ್ಸರನ್ನು ಎದುರಿಸಿತ್ತಿರುವ ವ್ಯಕ್ತಿಗೆ ಮನೋಬಲ ಸಿಗುತ್ಥದ.

ಇದರಿಂದ ಕ್ಯಾನ್ಸರ್ ಅಂದ ಕೂಡಲೇ ಜನರಲ್ಲಿ ಆಗುವ ಆಘಾತ ಮತ್ತು ಭಯ ಕಮ್ಮಿಯಾಗಬಹುದು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s